Friday, March 20, 2015

ಹಿಮಾಲಯದ ಮಡಿಲಲ್ಲಿ (SARPASS TREK)

ಸ್ಥಳದ ಹೆಸರು : ಕಸೊಲ್
ಕಾಲ ಅವಧಿ : 10 ದಿನ
ಹತ್ತಿರದ  ಸ್ಥಳಗಳು : ಕುಲ್ಲು, ಮನಾಲಿ


ಅದು ಜನವರಿಯ ತಿಂಗಳು ಎಲ್ಲೆಡೆ ಚಳಿಯು ಮಾಯವಾಗುತ್ತಿರಲು ಸೂರ್ಯ ತನ್ನ ಪಥ ಬದಲಿಸುವ ಯೋಚನೆಯಲ್ಲಿರಲು ನನ್ನ ಬಹುದಿನಂದ ಕನಸಿಗೆ ರೆಕ್ಕೆ ಬಂದಂತೆ ಸರ್ಪಸ್ಸ್ ಪರ್ವತರೋಣದ ಜಾಹೀರಾತು ಕಣ್ಣಿಗೆ ಬಿತ್ತು , ಸ್ವಲ್ಪ ಆಲೋಚನೆಯ ನಂತರ ಈ ಪರ್ವತಾರೋಹಣದಲ್ಲಿ ಬಾಗವಸಿಯಲು ತೀರ್ಮಾನಿಸಿದೆ , 3 ತಿಂಗಳ ಸತತ ತಯಾರಿಯೊಂದಿಗೆ ನಾನು ನನ್ನ ಪರ್ವತಾರೋಹಣಕ್ಕೆ ಸಿದ್ದವಾದೆ ,ಅಂದು ಮೇ 13 ಸೂರ್ಯನ ಈ ದಿನ ಕಿರಣಗಳು ಏನೋ ಉತ್ಸಾಹ
ಏನೋ ಸಾದಿಸುವ ಆಶಬಾವನೆ ಇಂದ ಕೂಡಿತ್ತು, ಮನದ ತುಂಬಾ ಪ್ರಶ್ನೆಗಳ ತುಮಾಲುಗಳು ಹೇಗೂ ಏನು ಎಂದೆಲ್ಲ ಸಂಶಯಗಳು ಏನೇ ಇರಲಿ ನನ್ನ ಕನಸಿನ ಬೆನ್ನಟ್ಟು ಹೊರಟೆ , ನನ್ನ ಗುರಿಯು ಕಸೋಲ್ ಆದರೂ ಮೊದಲು ಸ್ವಲ್ಪ ದೆಲ್ಹಿ ಹಾಗೂ ಮನಾಲಿ ತಿರುಗಿ ನೋಡಿ ನಂತರ ಕಸೋಲಿಗೆ ಹೋಗುವ ಯೋಜನೆ ನನ್ನದಾಯಿತ್ತು, ಅಂದು ಮೇ 15 ಮನಾಲಿ ಇಂದ ನನ್ನ ನಿರ್ದಿಷ್ಟ ಸ್ಥಳವಾದ ಕಸೋಲಿಗೆ ಪಯಣ , ಮೊದಲು ಮನಾಲಿ ಇಂದ ಕುಲ್ಲುವಿಗೆ ಪಯಣ ಇದು ಸುಮಾರು 1 ಗಂಟೆ ,ರಸ್ತೆಯು ತುಂಬಾ ಕಾಡಿದಾಗಿದು ,ಸಂಪೂರ್ಣ 1 ಗಂಟೆಯಲ್ಲಿ  ಸೀಟಿನ ಮೇಲೆ ಕುಳಿತುಕೊಳ್ಳುವ ಆವಕಾಶ ಸಿಕ್ಕಿದೆ ಕಮ್ಮಿ ,ಕುಲ್ಲುವಿನಿನ್ದ ಭೂಂತೂರು ಆಲಿಂದ ಕಾಸೋಲ್ ಇದು ಬರೋಬರಿ 2-3 ತಾಸಿನ ಪಯಣ , ಪಯಣದ ಉದಾಕ್ಕೂ ಜೊತೆಯಾಗುವಳು ನದಿ ಪಾರ್ವತಿ ಎಂತ ಮನೋಹರವಾಗಿ ಹಾಗೂ ತಾನು ಹರಿಯುವ ಜಗವನೆಲ್ಲ ಸಸ್ಯಶಾಮಲದಿಂದ ಸೀಗರಿಸಿದಾಳೆ  ರಸ್ತೆಯು ತುಂಬಾ ಕಾಡಿಡಾಗಿದು ಸ್ವಲ್ಪ ಎಚ್ಚರ ತಾಪಿದರು ಆಪಾಯ ಕಂಡಿತ , ಬಸ್ಸಿನ ಚಾಲಕ ತುಂಬಾ ಗಮನವಿಟ್ಟು ಚಲನೆ ಮಾಡಬೇಕು .ಇದು ಸಂಪೂರ್ಣ 10 ದಿನದ ಪರ್ವತಾರೋಹಣ,  ಪ್ರತಿ ದಿನ ದ ಸಂಕಿಸ್ಪ್ತ ಹಾಗೂ ರೋಚಕ ಅನುಭವವನ್ನು ಪ್ರಸ್ತುತ ಪಡಿಸುತೇನೆ ,

ದಿನ 1 : 3 ತಾಸಿನ ನನ್ನ ಬಸ್ಸಿನ ಪಯಣದ ನಂತರ ಬಸ್ ನನ್ನನು ಕಸೋಲ್ ಬೇಸ್ ಕ್ಯಾಂಪ್ ಬಳಿ ನಿಲ್ಲಿಸಿತು , ಬಸು  ಹೋದ ನಂತರ ತುಂಬಾ ನೇ ಧೂಳು , ಧೂಳು ಕೊಡವಿ ನೋಡಿದೆ ಕಾಣಿಸಿತು  YHAI ನಾಮಪಾಲಕ  ,ಒಂದೆಡೆಯಲ್ಲಿ ಪಾರ್ವತಿ ನದಿ ಹಾರಿತಿರುವುದು , ಮಾತೊಂದೆಡೆಯಲ್ಲಿ ಪರ್ವತ ಮಧ್ಯದಲ್ಲಿ ಇರುವುದೇ ಬೇಸ್ ಕ್ಯಾಂಪ್ .ಮೊದಲ ದಿನ regitration ಮಾತ್ರ , ಹೋಗಿ ನನ್ನ ಪರಿಚಯ ಮಾಡಿಕೊಂಡು ಬೇಕಾದ ಎಲ್ಲಾ ವಿವರಣೆ  ಕೊಟ್ಟು ನೋಂದಣಿ ಪೂರ್ಣಗೊಳಿಸಿದೆ ,ತದ ನಂತರ ನಾನು ನನ್ನ ಟೆಂಟ್ ಕಡೆ ಮುಖ ಮಾಡಿದೆ ಹೋಗಿದೊಡನೆಯೇ ಪರಿಚಯ ಮೊದಲೈತು ,ನಂತರ ಕಸೋಲ್ ಸುತ್ತಿಬಂದೆ ಸಂಜೆ ಸರಿ ಸುಮಾರು 6:00 ಗಂಟೆ ಚಹಾ ಸಮಯ ಬಿಸಿ ಚಹಾ ಜೊತೆಗೆ ತಿನಲು ಬಿಸಿ ಬಿಸಿ ಬಜ್ಜಿ ಕೂಡ , ಅದು ಆದ ನಂತರ ಅಲ್ಲಿ ಇದ್ದ ಪರ್ವತಾರೋಹಣ ಆಕಾಂಕ್ಷಿಯವರನ್ನು ಪರಿಚಯ ಮಾಡಿಕೊಂಡು ಮಾತಾಡಿದೆ , ಸಮಯ ಸುಮಾರು 8:30 ಊಟದ ಸಮಯ ತುಂಬಾ ಸುವ್ಯವಸ್ಥೆ ಯಲ್ಲಿ ಊಟವೂ ನೆಡೆದೀತು ತಡ ನಂತರ ಮರುದಿನ ಪರ್ವತಾರೋಹಣಕ್ಕೆ ತೆರಳುವ ಗುಂಪಿಗೆ ಬೀಳ್ಕೊಡೆ ಸಮಾರಂಬ ,   ಸಮಾರಂಬ ಶುರು ಮಾಡಿದ್ದೆ ಕನ್ನಡದ ಮಾತುಗಳಿಂದ ಅದಕ್ಕೆ ಸಿಕ್ಕ ಪ್ರೋತ್ಸಾಹಕ್ಕೆ ಮನ ತುಂಬಿ ಬಂತು , ತದ ನಂತರ ನಾಡಿನ ಕುರಿತು ಹಾಡಿದ "ಜೇನಿನ ಹೊಳೆಯೋ ಹಾಲಿನ ಮಳೆಯೋ ಸುದೆಯೊ ಕನ್ನಡ ಸವಿ ನುಡಿಯೋ " ಹಾಡಿಗೆ ಎಲ್ಲರೂ ಸಂತಸ ವ್ಯ್ಕ್ತಪಡಿಸಿದರು ಅಲ್ಲಿನ ಡೈರೆಕ್ಟರ್ ಕೂಡ ತುಂಬಾನೇ ಚಂದವಾಗಿ ಕಾರ್ಯಕ್ರ್ಮ ನೆಡೆಸಿದರು ಎಂದು ಮೆಚ್ಚುಗೆ  ವ್ಯ್ಕ್ತಪಡಿಸಿದರು,ಕೆಲವರಿಗೆ ಆ ಹಾಡಿನ ಅರ್ಥವನ್ನು ಇಂಗ್ಲೀಷ್ನಲ್ಲಿ ಹೇಳಿದ ಬಳ್ಳಿಕ ಅವರು ಕೂಡ ಕನ್ನಡ ಕಲಿಯುವ ಉತ್ಸಾಹ ತೋರಿದರೂ  , ಸಮಾರಂಬ ತುಂಬಾ ನೇ ಚೆನ್ನಾಗಿತು ಎಲ್ಲರೂ ಅಲ್ಲಿ ಮಾನಬ್ಚಿ ಹಾಡು , ಕುಣಿತ ಎಲ್ಲವನ್ನೂ ಮಾಡುತಿದರು ಆದೊಂದು ಕಲ್ಕರರಲ್ಲದವರಿಗೆ ಕಲೆ ತೋರಿಸುವ ರಂಗ ಸ್ಥಳವಾಗಿತು .ಕಾರ್ಯಕ್ರಮದ ನಂತರ ಎಲ್ಲಾ ದೀಪಗಳನ್ನು ಹಾರಿಸಿದರು , ದಣಿದಿದ್ದ ದೇಹಕ್ಕೆ ಚಾಪೆ ಸಿಕ್ಕರೆ ಸಾಕು ಆನಿಸಿತು ಮನೆಯವರಿಗೆ ದೂರವಾಣಿ ಕರೆ ಮಾಡಿ ಯೋಗಕ್ಷೇಮವಿಚಾರಿಸಿದೆ ನಂತರ ಚಾಪೆ ಸಿಕ್ಕಿತ್ತು ತಕ್ಷಣವೇ  ನಿದ್ರಾಡೇವತಾಗೆ ಶರಣಾದೆ .

ದಿನ 2-3: ದಿನಾಲೂ ಅಲಾರ್ಮ್ ಕರೆಗಂಟೆಗೆ ಕಣ್ಣು ತೆರೆಯುತ್ತಾ ಏಳುತ್ತಿದಾ ನನಗೆ ಈ ದಿನ ಸಿಟಿ ಸದ್ದು ಕೇಳಿಸಿತು ಆಗಲೇ ನನ್ನಗೆ ಅರಿವಾಗಿದು ನಾನು ಇರುವುದು YHAI ನಲ್ಲಿ ಎಂದು ಸಮಯ ನೋಡಿದಾರೆ 5:30 ಇಸ್ಟು ಬೇಗನಾ ಆದರೆ ಕ್ಯಾಂಪ್ ಲೀಡರ್ ಬೀಡಲ್ಲಿಲ ಎದ್ದು ನೋಡಿದೆ ಸೂರ್ಯನ ಮೊದಲ ಕಿರಣ ದಿಂದ ಕಂಗೊಳಿಸುತಿತ್ತು ಹಿಮಾಲಯ ನೋಡುವುದೇ ಸುಂದರ,ಪಕ್ಕಡಲೆ ಹರಿಯುತಿದ್ದ ಪಾರ್ವತಿಯ ಸದ್ದು ಬೆಳಗಿನ ಸುಪ್ರಬಾತದಂತೆ , ನನ್ನ ಬೆಳಗಿನ ಕಯ್ಕಾರ್ಯವನ್ನು ಮುಗಿಸಿ ಚಹಾಕ್ಕೆ ಸಿದ್ದವಾದೆ, ಆ ಚಳ್ಳಿಯಲ್ಲಿ ಚಹಾ ಕುಡಿಯುವುದೇ ಊಂದು ಆನಂದ.ಚಹಾದ ನಂತರ ,ಚಹಾದ ನಂತರ ನಮ್ಮನ್ನು ಬೆಂಡೆತಲು ಆಂದರೆ ವ್ಯಾಮಕ್ಕೆ ಕರೆದುಕೊಂಡು ಹೋದರು 2KM ಜ಼ೋಗ್ಗಿನ್ಗ್ ಆಮೇಲೆ ದೇಹದ ಎಲ್ಲಾ ಬಗ್ಗಗಳ ಪರಿಚಯವಾಗುವಂತಹ ವ್ಯಾಯಾಮ , ಅಲ್ಲಿಂದ ಬಂದ ಕೂಡಲೇ ಟೆಂಟ್ ಸ್ವಚ ಮಾಡಬೇಕು ತದನಂತರ ಬೆಳಗ್ಗಿನ ಉಪಹಾರ ಅವಲಕ್ಕಿ ಮತ್ತು ಮೊಟ್ಟೆ,ತದನಂತರ ಪರ್ವತಾರೋಹಣಕ್ಕೆ ತೆರಳುವ ಉತ್ಸಾಹಿಗಳಿಗೆ Flagoff , ಅಲ್ಲಿ ಎಲ್ಲರಿಗೂ ಶುಭಹಾರಿಸುತ್ತಾ ಬೀಳ್ಕೊಟೆವು.ಅದಾದನಂತರ ನಮ್ಮಗೆ ಈವತು ಆಕ್ಲಿಮೇಟೈಸೇಶನ್ ಅಂದರೆ ಪಕ್ಕದ ಪರ್ವತ ಏರುವುದು ,ನಾವುಗಳು ನಮ್ಮ ನಮ್ಮ ಬ್ಯಾಗುಗಲ್ಳನು ಹೊತ್ತು ನೆಡೆದವು,ಬೆಟ್ಟ ಏರುತ್ತಾ ಗುಂಪಿನ ಎಲ್ಲರನ್ನು ಪರಿಚಯ ಮಾಡಿಕೊಂಡು ಸರಿ ಸುಮಾರು 2.5 ತಾಸಿನಲ್ಲಿ ತುದಿ ತಲುಪಿದೆವು , ದಣಿವಾಗಿದ ನಮ್ಮಗೆ ಜೂಸ್ ಮಾಡಿಕೊಂಡು ದಾಣಿವಾರಿಸಿದೆವು ಎಲ್ಲರೂ ಒಟುಗೂಡಿ ಗುಂಪಿನ ನಾಯಕನನ್ನು ಗುರುತಿಸಿದೆವು ಹಾಗೂ ಸಂಜೆಯ ಕಾರ್ಯಕ್ರಮಕ್ಕೆ ಪಟ್ಟಿ ಮಾಡಿದೆವು ಇಂದು ನಾವು ನಮ್ಮ ಮುಂದಿನ ಗುಂಪಿಗೆ ಬೀಳ್ಕೊಡುವ ಸಮಾರಂಬ ನೆಡಿಸಿಕೊಡಬೇಕಾಗಿತ್ತು , ಸುಮಾರು ಮಧ್ಯಾನದ ವೇಳೆಗೆ ನಾವು ಕೆಳಗಿಳಿದೆವು ಊಟ ಮಾಡಿ ಸ್ವಲ್ಪ ವಿಶ್ರಮಿಸಿ ಸಂಜೆ ಚಹಾ ಮುಗಿಸಿ ಕಸೋಲ್ನಲ್ಲಿ ಸ್ವಲ್ಪ ತಿರುಗಾಡಿ ಸಂಜೆ ಊಟದ ನಂತರ ಬೀಳ್ಕೋಡೆಸಮಾರಂಬವನ್ನು ಶುರುಮಾಡಿದೆವು , ಶುರು ಆಗಿದ್ದ್ಡೆ ಕನ್ನಡದಲ್ಲಿ ಆಡಾಕೆ ಎಲ್ಲಿಲದ ಪ್ರೋತ್ಸಾಹ ದೊರಕ್ಕಿತು  ಸಮಾರಂಬ ಶುರು ಮಾಡಿದ್ದೆ ಕನ್ನಡದ ಮಾತುಗಳಿಂದ ಅದಕ್ಕೆ ಸಿಕ್ಕ ಪ್ರೋತ್ಸಾಹಕ್ಕೆ ಮನ ತುಂಬಿ ಬಂತು , ತದ ನಂತರ ನಾಡಿನ ಕುರಿತು ಹಾಡಿದ "ಜೇನಿನ ಹೊಳೆಯೋ ಹಾಲಿನ ಮಳೆಯೋ ಸುದೆಯೊ ಕನ್ನಡ ಸವಿ ನುಡಿಯೋ " ಹಾಡಿಗೆ ಎಲ್ಲರೂ ಸಂತಸ ವ್ಯ್ಕ್ತಪಡಿಸಿದರು ಅಲ್ಲಿನ ಡೈರೆಕ್ಟರ್ ಕೂಡ ತುಂಬಾನೇ ಚಂದವಾಗಿ ಕಾರ್ಯಕ್ರ್ಮ ನೆಡೆಸಿದರು ಎಂದು ಮೆಚ್ಚುಗೆ  ವ್ಯ್ಕ್ತಪಡಿಸಿದರು,ಕೆಲವರಿಗೆ ಆ ಹಾಡಿನ ಅರ್ಥವನ್ನು ಇಂಗ್ಲೀಷ್ನಲ್ಲಿ ಹೇಳಿದ ಬಳ್ಳಿಕ ಅವರು ಕೂಡ ಕನ್ನಡ ಕಲಿಯುವ ಉತ್ಸಾಹ ತೋರಿದರೂ  , ಸಮಾರಂಬ ತುಂಬಾ ನೇ ಚೆನ್ನಾಗಿತು ಎಲ್ಲರೂ ಅಲ್ಲಿ ಮಾನಬ್ಚಿ ಹಾಡು , ಕುಣಿತ ಎಲ್ಲವನ್ನೂ ಮಾಡುತಿದರು ಆದೊಂದು ಕಲ್ಕರರಲ್ಲದವರಿಗೆ ಕಲೆ ತೋರಿಸುವ ರಂಗ ಸ್ಥಳವಾಗಿತು  ಸುಂದರ ಸಂಜೆಯ ನಂತರ, ಮನೆಯ್ವರಿಗೆ ಯೋಗಕ್ಷೇಮ ತಿಳಿಸಿ , ನಾವೆಲ್ಲ ನಮ್ಮ ಟೆಂಟಿನಲ್ಲಿ ಸ್ವಲ್ಪ ಹೋತು  ಮಾತಾಡಿ ಮಾತ್ತೆ ನಿದ್ದೆಗೆ ಎಲ್ಲರೂ ಶರಣಾದ್ರೂ , ಯಾರು ಗೊತಿಲ್ಲದವರು ಗೊತಿಲ್ಲದ ಊರು,ಆದರೂ ಕೆಲವೇ ದಿನದಲ್ಲಿ ಎಲ್ಲರೂ ಸ್ನೇಹದಿಂದ ಒಂದೇ ಟೆಂಟಿನಲ್ಲಿ ಹೊಂದಿಕೊಂಡಿರುವುದು ನೋಡಿ ಆನಿಸಿತು, ಹೊಂದಿ ನೆಡಿಯುವವನಿಗೆ ಲೋಕದ ತುಂಬಾ  ಸ್ನೇಹಿತರು ಎಂಬ ನನ್ನ ಅಜ್ಜನ ಕೀವಿ ಮಾತು  .ಕಣ್ಣು ಮೂಚಿದೊಡನೆಯೇ ನಿದ್ರದೇವತೆ ತನ್ನ ನಿದ್ದೆಯ ರಾಜ್ಯಕ್ಕೆ ಕರೆದೊಯ್ದಳು .
ಮೂರನೇ ದಿನ ಕೂಡ ನಮ್ಮ ದಿನಚರಿ ಎರಡನೇ ದಿನ ರೀತಿಯೇ ಇತ್ತು ಆದರೆ ಈವತು ರಾಕ್ ಕ್ಲೈಂಬಿಂಗ್ ಮಾತೆ ರಪ್ಪ್ಳಿಂಗ್ ಮಾಡಿದೆವು , ಮೊದಲ ಸಲ ಇದನ್ನು ನಾನು ಮಾಡಿದು ತುಂಬಾ ನೇ ಚಂದಾ ಎನಿಸಿತು , ಸಂಜೆ ಊಟದ ನಂತರ ನಮ್ಮಗೆ ಬೀಳ್ಕೋಡಸಮಾರಂಬವಿತು ಆದನು ಮುಗಿಸಿ ನಾವು ನಾಳೆಗೆ ಹೊರ್ದುವ ಸಿದ್ದತೆ ಮಾಡಿ ಸ್ವಲ್ಪ ಬೇಗನೆ ಮಲಗಿದೆವು .

ದಿನ 4:ಈ ದಿನ ನಮ್ಮ ಪಾರ್ವತರೋಹಂ್‌ಕ್ಕೆ ಹೋಗುವ ದಿನ , ಆದರಿಂದಲೇ ಇಂದು ನಮ್ಮಗೆ ವ್ಯಾಯಾಮ ಇಲ್ಲ ಎಲ್ಲವನ್ನೂ ಸಿದ್ದ ಮಾಡಿಕೊಂಡು ನಾವು ನಮ್ಮ ತಿಂಡಿ ಮುಗಿಸಿ ಬುತ್ತಿ ಕಟ್ಟಿಕೊಂಡು FlagOff ಗೆ ಸಿದ್ದವಾದೆವು ,Flagoff ನಂತರ ದೇವರನ್ನು ಸ್ಮರಿಸುತ್ತ ನಮ್ಮ ಹೆಜ್ಜೆ ಹಾಕುತ್ತಾ ನೆಡೆದವು .ನಮ್ಮ ಗುರಿ ಗ್ರಹನ್ ತಲುಪುವುದು ಅದು ಸರಿ ಸುಮಾರು 10KM ದೂರ, ಹೆಜ್ಜೆ ಹಾಕುತ ಪರ್ಕೃತಿಯ ನಡುವೆ , ನೀರಿನ ಜರಿಗಳನ್ನು ದಾಟುತ್ತ ,ಕಾಡಿನ ಮಧ್ಯದಲ್ಲಿ ನೆಡೆದವು , ಸುಮಾರು 6KM ನೆಡೆದ ನಂತರ ಎಲ್ಲರೂ ಸ್ವಲ್ಪ ವಿಶ್ರಮಿಸಲು ನಿರ್ಧರಿಸಿದೆವು.ತಂದಿದ್ದ ಬುತ್ತಿ ತೆರೆದವು ಆದರಲ್ಲಿದ ಚಪಾತಿ ತಿಂದು ಸ್ವಲ್ಪ ವಿಶ್ರಮಿಸ,ತದ ನಂತರ ನಾವು ನಮ್ಮ ಗುರಿಯಾದ ಗ್ರಹನ್ ಗೆ ತೆರಳಿದೆವು ಸರಿ ಸುಮಾರು ಸಂಜೆ 4:30ರ ವೇಳೆಗೆ ನಾವು ಗ್ರಹನ್ ತಲುಪಿದೆವು , ಅದು ಒಂದು ಸಣ್ಣ ಊರು ಎಂದರೆ ತಪ್ಪಾಗಲಾರದು , ಅಲ್ಲಿಯೇ ಚಿಕ್ಕ ಚಿಕ್ಕ ಮಕ್ಕಳು ಆಟವಾದುತಿದರು , ನಾವು ಕ್ಯಾಂಪ್ ಗೆ ತೆರಳಿ ನಮ್ಮ ಸಾಮಾನುಗಳನ್ನು ಇಟ್ಟು ಅಲ್ಲಿಯ ಕ್ಯಾಂಪ್ ಲೀಡರ್ ಗೆ ವರದಿ ಮಾಡಿದೆವು , ದಣಿದಿದ ನಮ್ಮಗೆ ಸ್ವಲ್ಪ ಸಾಮ್ಯದಲ್ಲೇ ಸೂಪ್ ಕೊಟ್ಟರು ತುಂಬಾನೇ ಚಂದವಿದ್ದ ಸೂಪ್ ಸವಿದ ನಂತರ ನಾವು ಸ್ವಲ್ಪ ಸುತ್ತ ಮುತ್ತಲು ಓಡಾಡಿದೆವು , ಎಂದು ನೋಡದ ಕೆಲವು ಹಕ್ಕಿಗಳು ನೋಡದ ಕೆಲವು ಮರಗಳು , ಹಾಗೂ ಎಂದು ಆನುಬವ ಮಾಡದ ನಿಶೈಬ್ದದ್ತೆ ಎಲ್ಲಾವೂ ಅಲ್ಲಿ ಮನೆ ಮಾಡಿದವು , ಸಂಜೆ 5:30ರ ವೇಳೆಗೆ ಚಹಾ , ಚಹಾದ ನಂತರ ನಾವು ಗೊಂಪುಕಟ್ಟಿಕೊಂಡು ಮಾತಾಡುತ್ತಾ ಸಮಯ ಕಳೆದೀದೆ ಗೋತಗಳ್ಲಿಲ ಸುಮಾರು 6:30ಗೆ ನಮ್ಮ ಊಟ , ತುಂಬಾ ಸಂಯೋಜಿತ ಊಟವದು,ಅಲ್ಲಿ ವಿದ್ಯುತ್ ಇಲ್ಲ , ರೇಡಿಯೋ ಬರೋದಿಲ್ಲ,ದೂರವಾಣಿ ಸಿಗೋದಿಲ್ಲ,ಅಲ್ಲಿ ಬಾರಿ ಮಾತು , ಹಾಡುಗಳಿಗೆ ಮಾತ್ರ ಜಾಗ , ನಾವು ಊಟದ ನಂತರ ಎಲ್ಲರೂ ಸೇರಿ ಅಂತ್ಯಾಕ್ಷರಿ ಆಡಿದೆವು ,ಇಂದು ಎಲ್ಲರೂ ಬನ್ನ್ಗಳದಲ್ಲಿ ಚುಕ್ಕಿಗಳ ರಾಜ್ಯ ವನ್ನು ನೋಡಿ , ಎಲರಿನ್ದಲು ಒಂದೇ ಪ್ರಶನ್ನೇ  ಎಸ್ಟು ದಿನವಾಯಿತು ನಾವು ಈಗೆ ಚುಕ್ಕಿಗಳನ್ನು ನೋಡಿ ಎಂದು, "ಚಿಕ್ಕ ಚಿಕ್ಕ ಸಂತೋಷವೇ ಬಾಳಿನ ತುಂಬಾ ದೊಡ್ಡ ಸಂತೋಷ "ಎಂದು ಯಾರೋ ಹೇಳಿದ ಮಾತುಗಳು ನೆನಪಿಗೆ ಬಂದವು ,ಸುಮಾರು 9:30 ವೇಳೆಗೆ ದಣಿದಿದ್ದ ದೇಹ ವಿಶ್ರಾಂತಿ ಕಡೆ ಮುಖ ಮಾಡಿತು ನಾವು ನಮ್ಮ ಸ್ಲೀಪಿಂಗ್ ಬ್ಯಾಗ್ಸ್ ನಲ್ಲಿ ತುರಿ ಎಲ್ಲರಿಗೂ ಶುಭರಾತ್ರಿ ಕೋರಿದೆವು ,ಪ್ರಕೃತಿಯ ನಡುವೆ ಹಾಯಾಗಿ ಹಾಗೂ ನೆಮ್ಮದಿಯಾಗಿ  ಕನಸಿನ ಲೋಕ್ದ ಕಡೆಗೆ ತೆರಳಿದೆವು.

ದಿನ 5: ಸುಮಾರು 5:30ರ ವೇಳೆ ನನಗೆ ನಿದ್ದೆ ಸರಿಯಿತು , ಎದ್ದು ಹೊರ ನೋಡಲು ಸೂರ್ಯನ ಮೊದಲ ಕಿರಣಗಳು ಹಿಮಾಲಯದ ಮೇಲೆ ಬೀಳಲು, ಅದು ಚಿನ್ನದಂತೆ ಹೊಳೆಯುತಿತ್ತು ಪ್ರಕೃತಿಯ ಈ ರಮ್ಯಾ ನೋಟಕ್ಕೆ ಮನತುಂಬಿತು , ಎಲ್ಲ ಕಡೆಯೂ ನಿಶ್ಯಬ್ದತೆ  , ಸುಮಾರು 6:00 ಗಂಟೆಗೆ ನಮ್ಮ ಚಹಾ , ಹ ಹ ಕೊರೆಯುವ ಚಳ್ಳಿಯಲ್ಲಿ ಚಹಾ ಕುಡಿಯುವ ಮೋಜೆ ಹೇಳತೀರದು ,ಸುಮಾರು 7:00 ಕ್ಕೆ ಎಲ್ಲರೂ ನಮ್ಮ ಮುಂದಿನ ಪಯಣ ಬೆಳೆಸಲು ತಯಾರಾದೆವು , 7:30ಕ್ಕೆ ನಮ್ಮ ತಿಂಡಿ ಈ ದಿನ ಪೂರಿ ಸಾಗು ಹಾಗೂ ಕಿರು , ಆಮೇಲೆ ನಮ್ಮ ಬುತ್ತಿ ಕಟ್ಟಿಕೊಂಡು ಸುಮಾರು 8:00 ಕ್ಕೆ ಎಲ್ಲರೂ ಸಿದ್ದಾರದೆವು , ಕ್ಯಾಂಪ್ ಲೀಡರ್ ನಮ್ಮ ಗೊಂಪಿನ ಬಗ್ಗೆ ಮೆಚುಗೆ ವ್ಯಕ್ತಪದೆಸಿದರೂ ಹಾಗೂ ಮುಂದಿನ ಪಯಣಕ್ಕೆ ಶುಭ ಕೋರಿದರು , ದೇವರ ನಾಮಸ್ಮರಣೆ ಮಾಡಿ ಕೊಂಡು ನಮ್ಮ ಮುಂದಿನ ಹೆಜ್ಜೆ ಹಾಕಿದೆವು , ಈ ದಿನ ನಾವು ಸ್ವಲ್ಪ ಕೆಗಿಳ್ಡಿ ಆಮೇಲೆ ಮೇಲೇರುವ ಹಾಗೆ ಇರುತ್ತೆ ನಮ್ಮ ದಾರಿ ಎಂದು ತಿಳಿತು ,ಇಂದು ನಮ್ಮ ಗುರಿ ಪಾದ್ರಿ ಇದು ಸುಮಾರು 10KM ದೂರವಿದು ಸಂಜೆಯಾಗುವ ವೇಳೆಗೆ ತಲುಪಬೇಕು ಇಲ್ಲ್ವಾದರೆ ಕಷ್ಟ ಎಂದು ಗೈಡ್ ತಿಳಿಸಿದರು , ಇಳಿಯ್ವುದು ಹತ್ತುವುಡಕಿಂತ ಕಷ್ಟ ಇಂದು ನಾವು ಕಾಡಿನ ಮಧ್ಯದಿಂದ ನೆಡೆದವು , ಸುಂದರ್ವಾಗಿತು ನಮ್ಮ ಈ ಪಯಣ, ಎಲ್ಲರೂ ಒಬಾರಿಗೋಬಾರು ಸಹಾಯ ಮಾಡಿ ಕೊಂಡು ನೆಡೆದವು , ಸ್ವಲ್ಪ ದೂರ ಕ್ರಮಿಸಿದ ನಂತರ ನಾವು ಒಂದು ಸಣ್ಣ ನದಿಯ ಕಡೆ ಬಂದೆವು ಆಳೆ ಸ್ವಲ್ಪ ವಿಶ್ರಮಿಸಿ, ಮುಂದೆ ನೆಡೆದವು , ಸಣ್ಣ ದಾಗಿ ಕಾಣುವ ಈ ನದಿಯು ಮುಂದೆ ದೊಡ್ಡ ದಾಗಿ ಕಸೋಲ್ನಲ್ಲಿ ಹರಿಯುವುದು ನಾವು ಮಧ್ಯಾನದ ವೇಳೆಗೆ ಸುಮಾರು 6KM ಕಾರ್ಮಿಸಿದೆವು , ತದನಂತರ ತಂದಿದ್ದ ಬುತ್ತಿ ಯನ್ನು ತೆರೆದು ಎಲ್ಲರೂ ಊಟ ಮಾಡಿ ಸ್ವಲ್ಪ ವಿಶ್ರಮಿಸಿದೆವು , ಈ ವೇಳೆಗೆ ಸುಮಾರು ಎಲ್ಲರೂ ನನಗೆ ತಿಳಿದಿದರು,ಕೆಲವರಂತೂ ನಾವು ಎಸ್ಟೋ ವರ್ಷದಿಂದ ಗೊತ್ತಿರುವಹಾಗೆ ಮಾತಾಡುತಿದರು , ನಾವು ಮುಂದೆ ಸಾಗಿದೆವು ಸುಮಾರು ಸಂಜೆ 4:30ರ ವೇಳೆಗೆ "ಪಾದ್ರಿ ಗೆ ನಿಮಗೆ ಸ್ವಾಗತ ಎಂಬ ನಾಮಪಾಲಕವನ್ನು ನೋಡಿದೆವು " ದಟ್ಟ ಕಾಡು , ಕಾಡಿನ ಮಧ್ಯದಲ್ಲಿ ಒಂದು ಬಯಲು ಪ್ರದೇಶ ಒಂದು ಕಡೆ ನೀರಿನ ಹರಿವು ಮಾತೊಂದು ಕಡೆ ಹಿಮಾಲಯದ ದಿವ್ಯ ದರ್ಶನ ಅಲ್ಲೇ ಇರುವುದು ಪಾದ್ರಿಯ ಕ್ಯಾಂಪ್ ,ಕ್ಯಾಂಪ್ ಸೇರಿದ ತಕ್ಷಣ ನಾವು ಟೆಂಟ್‌ಗಳಿಗೆ ಹೋಗಿ ಸವ್ಲ್ಪ ವಿಶ್ರಮಿಸ್ದೆವು,ಎದುರು ನೋಡೋತಿದಾ ಹಿಮಾಲಯದಲ್ಲಿ ಸ್ನೋ ಲೈನ್ ತುಂಬಾನೇ ಕೆಳಗೆ ಬರುತ್ತಿತು ಇದು ನಮ್ಮ ಮುಂದಿನ ಪಯಣಕ್ಕೆ ತುಂಬಾನೇ ಪರಿಣಾಮ ಮಾಡಬಹುದು ಎಂದು ಎಲ್ಲರೂ ಹೇಳ್ತ ಇದ್ರು ,ಹಿಮಾಲಯದ ಹತ್ತಿರ ಹೋದ ಎಲ್ಲ ಮೋಡಗಳು ಅಲ್ಲಿ ಹಿಮ ಮಳೆ ಸುರಿಯುತಿತು , ಅಲ್ಲೇ ಹರಿತ್ತಿದ ನೀರಿನ ಜರಿಯ ನೀರು ತುಂಬಾನೇ ಸಿಹಿ ಹಾಗೂ ಆಡು ಹಿಮಕರಗಿ ನೀರಾಗುವುದರಿಂದ ಈ ನೀರು ಮಿನರಲ್ ವಾಟರ್ ರೀತಿ ಇರುತದೆ , ನಾವು ಸೂಪ್ ಕೊಡಿದೆವು ಎಲ್ಲರೂ ಬಯಲಿಲ್ನಲ್ಲಿ ಆಟವಾಡಿ ಮೊದಲ ಹಿಮದ ಸಪ್ರ್ಶಮಾಡಿದೆವು , ಸ್ವಲ್ಪ್ ಸಮಯದ ನಂತರ ಚಹಾ ಕುಡಿದು ಸ್ವಲ್ಪ ಸಮಯ ಕಳೆದವು, ಸಂಜೆ 6:30 ರ ವೇಳೆಗೆ ಊಟ ಮಾಡಿ , 7:30 ರ ವೇಳೆಗೆ ಕ್ಯಾಂಪ್ ಫೈಯರ್ ಹಾಕಿ 10ರ ವರೆಗೆ ನಮ್ಮ ಅಂತಾಯ್ಕ್ಷ್ಜಾರಿ ಕಾರ್ಯಕ್ರಮವನ್ನು ಮಾಡಿದೆವು , ರಾತ್ರಿ ಹಾಗುತಿದ ಹಾಗೆ ತುಂಬಾನೇ ಚಲ್ಲಿ ಆವರಿಸಿತು , ಎಲ್ಲರೂ ತಮ ತಮ ಟೆಂಟಿಗೆ ಹೋಗಿ ನಿದ್ರದೇವತೆಗೆ ಶರಣಾದರು

ದಿನ 6: ಸರಿ ಸುಮಾರು ಬೆಳಿಗಿನ ಜಾವ 5:30ಕ್ಕೆ ಹಕ್ಕಿಗಳ ಚಿಲಿ ಪಿಳಿಗಳು ನಮ್ಮಗೆ ಬೆಳಗಿನ ಆಲ್ರಂ , ಎದ್ದು ಅಲ್ಲೇ ಇದ್ದ ನೀರಿನ ಜಾರಿಗೆ ಕೈ ಇಟ್ಟೆ .. ಅದು ಯಾವ ರೆಫೀರ್ಗೇರಟೊರ್ ಕಿಂತಲೂ ಕಡಿಮೆ ಇಲ್ಲದ ತಂಪಾದ ನೀರು, ಆದನ್ನು ಕುಡಿಯುವ ಧೈರ್ಯ ಇರಲ್ಲಿಲ, ಮುಂಜಾನೆ ಯ ಹಿಮಾಲ್ಯದ ಮೇಲೆ ಹರಿದಾಡುತ್ತಿದ ಮೋಡಗಳು ಹಾಗೂ ಸೂರ್ಯನ ಮೊದಲ ಕಿರಣಗಳು ಹಿಮಾಲಯದ ಮೇಲೆ ಎಂತಹ ಸೌಂದರೈವಾದು ನೋಡುವುದೇ ಒಂದು ಸಂತೋಷ , ಬೆಳಿಗಿನ ಚಹಾ ಗೆ ಕಾಯುತಿದೆವು ಚಹಾ ದ ನಂತರ ನಮ್ಮ ತಿಂಡಿ ಮುಗಿಸಿ ನಮ್ಮ ಡಬ್ಬಿಗಳನ್ನು ತಗೆದುಕೊಂಡು ಕೊರೆಯುವ ನೀರನ್ನೇ ತೆಗೆದುಕೊಂಡು ಕ್ಯಾಂಪ್ ಲೀಡರ್ ಇಂದ ಬೀಳ್ಕೊಂಡು ನಮ್ಮ ಮುಂದಿನ ಸ್ಥಳವಾದ ಮಿನ್ ಥ್ಯಾಚ್(Min thach) ಅಥವ ರತಾಪಾನಿ(Ratapani) , ಇದು ಸುಮಾರು 6KM ದೂರವಿದು ಇದು ತುಂಬಾ ಕಡಿದಾದ ಪ್ರದೇಶ ಹಾಗೂ ಬಹು ಎಚ್ಚರದಿಂದ ಕೊನೆಯ 2 KM ನೆಡೆಯಬೇಕು ಇದು ನಮ್ಮ ಗ್ರೂಪ್ ಲೀಡರ್ ಹೇಳಿದ ಹಾಗೆಯೇ ನಾವು ಇಂದು ಸ್ನೋ ಲೈನ್ (snow line ) ತಲ್ಪುತೇವೆ ಸ್ವಲ್ಪ ಬೇಗ ಹೆಜ್ಜೆ ಹಾಕಬೇಕು ಸೂರ್ಯ ಮುಳುಗುವುದಕ್ಕಿಂತ ಮೊದಲೇ ನಾವು ಜಾಗ ತಲುಪಬೇಕು ಇಲ್ಲವಾದಲ್ಲಿ ತುಂಬಾನೇ ಕಸ್ಟ ಎಂದು ಗ್ರೂಪ್ ಲೀಡರ್ ಹೇಳಿದ, ದಟ್ಟ ಕಾಡಿನ ನಲ್ಲಿ ನೆಡೆಯುತ ಸಾಗಿದೆವು ದಾರಿ ತುಂಬಾ ಕಾಡಿದಾಗುತ ಹೋಯಿತು ತುಂಬಾ ಪರಿಶ್ರ್ಮದಿಂದ ಸ್ವಲ್ಪ ಸ್ವಲ್ಪ ಸುದರಿಸ್ಕೊಂಡು ಒಬಾರಿಗೋಬಾರು ಸಹಾಯ ಮಾಡುತ ಮಾತಾಡುತಾ ನೆಡೆದವು.ಊಟದ ಸಮಯಕ್ಕೆ ನಾವು 6KMನೆಡೆದಿದವು ತಂದ ಬುತ್ತಿ ಯನ್ನು ಊಟ ಮಾಡಿ ಸುತಲು ಇದಾ ಜಾಗ ನೋಡುತಿದೆವು ,ಹಿಮಾಲಯವು ತುಂಬಾ ಹಾಟಿರ್ ಕಾಣುತ್ತಿತು , ನಾವು ನಮ್ಮ ಕೊನೆಯ ಕ್ಯಾಂಪ್ ಆದ "ನಾಗರು"(Nagaru) ಕೂಡ ನೋಡಿದೆವು , ಅಲ್ಲಿ ಕೆಲವು ದೊಡ್ಡ ದೊಡ್ಡ ಮರಗಳಿಗೆ ಸಿಡಿಲು ಬಡಿದು ಒಮೇಲೆ ಸೂಟಿಹೊದ ಮರಗಳ್ನು ನೋಡಿದೆವು ,ಒಂದು ಕಡೆ ನಮ್ಮ ಗುರಿ ಕಾಣುತಿದೆ ಎಂಬ ಕುಷಿ ಮಾತೊಂದು ಕಡೆ ತಲುಪುವುದು ಕಷ್ಟ ಅನ್ನುವ ದಿಗಿಲು ಏನೆಆಗಲಿ ಮಾಡುವೆವು ಎಂದು ನಿಶ್ಚಯ ಮಾಡಿಕೊಂಡು ಮುಂದೆ ಹೆಜ್ಜೆ ಹಾಕಿದೆವು , ಮೊದಲ್ಬಾರಿಗೆ ಹಿಮ ಕರಗಿ ನೀರಾಗಿ ಹರಿಯುವುದನ್ನು ನೋಡಿದೆವು , ಹಾಗೂ ಮಂಜುಗಡ್ಡೆ ಮೇಲೆ ಮೊದಲಬಾರಿಗೆ ನೆಡೆದವು , ಮೊದಲು ಕುಶಿ ಎನ್ಸಿದರು ಆದರಮೇಲೆ ತುಂಬಾ ಹುಷಾರಾಗಿ ನೆಡೆಯಬೇಕು ಎಂದು ಗೋತಯೇತು , ಸ್ವಲ್ಪ ಎಚ್ಚರ ತಪ್ಪಿದರೂ ಆಪಾಯ ಕಂಡಿತ, ಹೇಗೆ ನೆಡೆಯುತ ತುಸು ಮುಂದೆ ನೆಡೆದ ತಕ್ಷಣ ನಾಂಗೆ ಜೋರಾಗಿ ಮಳೆರಾಯ ಕೃಪೆ ಮಾಡಿದ , ನಿಜ ಹೇಳುತೇನೆ ಮಳೆ ರಾಯನ ಈ ಕೃಪೆ ನಮಗೇನು ಕುಶಿ ಕೊಡಲೀಳ ಏಕಂದ್ರೆ ನಮ್ಮಗೆ ಎಲ್ಲಿಯೂ ನಿಲ್ಲಲು ಜಾಗ ಇರಲಿಲ , ಕೊನೆಗೆ ಮರಗಳ ನಡುವೆ ಕೊಂಚ ನಿಂತು ರಕ್ಷಣೆ ಪಡೆದವು.ಸ್ವಲ್ಪ ದೂರ ನೆಡೆದ ಮೇಲೆ ನಾವು ಹಿಮ ಮೇಲೆ ಹಿಮ ವನ್ನೇ ನೋಡಿದೆವು , ರತಾಪಾನಿಯ ಕೊನೆಯ ಕೊಂಚ ದೂರ ಸ್ವಲ್ಪ ಕಷ್ಟವೀ ,ಅದು ಮಳೆ ಬಂದು ಅಲ್ಲಿಯ ದಾರಿ ಇನ್ನೂ ಕಷ್ಟವಾಗಿತು,ಜಾರುವ ದಾರಿ , ಹಾಗೂ ದಾರಿ ತುಂಬಾ ಕಾಡಿದಾಗಿತ್ತು , ಮರಗಳ ಬೇರುಗಳನ್ನು ಸಹಾಯವಾಗಿ ಹಿಡಿದು , ಮಕಾಲ ನೆಡಿಗೆಯ ರೀತಿ ನಾವು ಆ ದಾರಿಯಲ್ಲಿ ಸಾಗಿದೆವು .ಆ ದಾರಿ ಮುಗಿದಮೇಲೆ ನಾವು ಹಿಮದ ಮೇಲೆ ಸ್ವಲ್ಪ ನೆಡೆದವು , ನಂತರ ಮಳೆಯ ತುಂತರು ಶುರುವಾಯಿತ್ತು, ಹಾಗೇನೇ ಸ್ವಲ್ಪ ಮುಂದೆ ನೆಡೆದೆವು , ಅಲ್ಲಿಯೇ ನೋಡಿದೆವು , ನಮ್ಮ ಟೆಂಟ್ , ಟೆಂಟ್ ಗಳ ಒಳಗೆ , ಮಳೆಯು ಜೋರಾಗಿ ಶುರುವಾಯಿತ್ತು ತಡ ನಂತರ ಹಿಮದ ಮಳೆ ಶುರುವಾಯಿತ್ತು,ಎಲ್ಲರೂ ಟೆಂಟಿನಲ್ಲಿ ಕುಳಿತುಕೊಂಡು ವಿಶ್ರಮಿಸಿದೆವು , ನಮ್ಮ ಟೆಂಟಿಗೇನೆ , ಬಿಸಿ ಬಿಸಿ ಸೂಪ್ ತಂದು ಕೊಟ್ಟ ನಮ್ಮ ಟೀಮ್ ಲೀಡರ್ ಗೆ ಧನ್ಯವಾದಗಳು , ಸರಿ ಸುಮಾರು 1 ಗಂಟೆ ಹಿಮದ ಮಳೆ ಸುರಿಯಿತು  ತಡ ನಂತರ ನಾವು ಹೊರಗಡೆ ಬಂದು ನೋಡಿದೆವು ,ಟೆಂಟಿನ ಸುತ್ತ ಹಿಮ , ಅಲ್ಲಿನಹಿಮವೆಲ್ಲಾ ನಾವು ತೆರವು ಗೊಳಿಸಿ, ಆ ಚಳಿಯಲ್ಲಿ ಚಹಾ ಕುಡಿಯುವುದು ಒಂದು ಮಜಾ , ಚಹಾ ಜೊತೆ ನಮ್ಮಗೆ ಫಿಂಗೆರ್ಚಿಪ್ಸ್ ಕೂಡ ಸಿಕ್ಕಿತು ,ತದ ನಂತರ ನಾವು ಕ್ಯಾಂಪ್ ಲೀಡರ್ ನನ್ನು ಬೇಟಿ ಮಾಡಿದೆವು , ತದ ನಂತರ ಸಂಜೆ 6ಕ್ಕೆ ನಮ್ಮಗೆ ಊಟ , ಊಟ ಕೂಡ ತುಂಬಾ ಚೆನ್ನಾಗಿಯೇ ಇತ್ತು , ಊಟದ ನಂತರ ಎಲ್ಲರೂ ಅವರ ಅವರ ಟೆಂಟಿನಲ್ಲಿ ಬೆಚ್ಚನೆಯ ಸ್ಲೀಪಿಂಗ್ ಬ್ಯಾಗ್ ನಲ್ಲಿ ಕೂತು ಎಲ್ಲರೂ ಕೆಲವು ಸಮಯ ಮಾತಾಡಿ ಕಾಲ ಕಳೆದೆವು , ಸರಿ ಸುಮಾರು 8 ಗಂಟೆಗೆ ನಾವೆಲ್ಲರೂ ನಿದ್ರದೇವತೆಯ ಜೊತೆ ಸ್ವಪ್ನ ಲೊಕ್ಕಕೆ ತೆರಳಿದೆವು .

ದಿನ 7:ಇಂದು ನಾನು ಸುಮಾರು 5:30ಕ್ಕೆ ಎದ್ದು ಟೆಂಟಿನಿಂದ ಹೊರ ನೋಡಲು ಸೂರ್ಯನ ಕಿರಣಗಳು ಅಲ್ಲಿನ ಪರ್ವತ ಶ್ರೇಣಿಗಳ ಮೇಲೆ ಮುಟ್ಟಲು ಎಲ್ಲವೂ ಚಿನ್ನದಂತೆ ಕಾಣುತಿದವು , ಇಲ್ಲಿಂದ ನೋಡಲು ಪಾರ್ವತಿ ವ್ಯಲಿಯ ಸಂಪೋರ್ನ ಪರ್ವತ ಶ್ರೇಣಿಯು ಕಣಸಿಗುತದೆ , ಆದೊಂದು ರಮ್ಯಾ ನೋಟ , ಈ ಎಲ್ಲ ನೋಟಗಳನ್ನು ನನ್ನ ಕ್ಯಾಮರ ದಲ್ಲಿ ಸೆರೆಹಿಡಿದೇವು, ಚಹಾದ ನಂತರ ನಾವು ಕ್ಯಾಂಪ್ ಲೀಡರ್ ಜೊತೆಗೂಡಿ ಫೋಟೋ ಕಿಕ್ಕಿಸಿದೆವು ತಿಂಡಿಯ ನಂತರ ಇಂದು ನಮ್ಮ ಮುಂದಿನ ಗುರಿಯದ ನಾಗರು (Nagaru) ಕಡೆ ನೆಡೆಯಲು ಶುರು ಮಾಡಿದೆವು,ಇಂದಿನ ದಾರಿ ಸ್ವಲ್ಪ ಕಸ್ಟಕರ ಹಾಗೂ ತುಂಬಾ ಎಚ್ಚರ ದಿಂದ ನೆಡಿಯುವ ದಾರಿ , ನಾವು ನಮ್ಮ ಊಟವನ್ನು ಕಾಟಿಕೊಂಡು ನಮ್ಮ ದಾರಿಯಲ್ಲಿ ನೆಡೆಯಾತೊಡಗಿದೆವು , ರಾತ್ರಿಯ ಹಿಮದ ಮಳೆ ಇಂದ ದಾರಿಯಲ್ಲಿ ತುಂಬಾ ಹಿಮವಿತ್ತು ಅಲ್ಲಿ ಅಲ್ಲಿ ನಾವು ಜಾರಿ ಬಿದ್ದೆವು ಸ್ವಲ್ಪ ದೂರ ಸರಿದ ಮೇಲೆ ನಮ್ಮಗೆ ಹಿಮಾದಮೇಲೆ ಸ್ಲೈಡ್ ಮಾಡುವ ಅವಕಾಶ ಸಿಕ್ಕಿತು ಚಿಕ್ಕದಾದ್ರು ಎಲ್ಲರೂ ಮಕಳಾಂತೆ ಆಡಿದೆವು , ದಾರಿ ಸವಿಯಲು ನಾವು ಎತ್ತರ ಎತ್ತರ ಜಾಗಕ್ಕೆ ನೆಡೆಯಾತೊಡಗಿದೆವು,ಹಿಮಾದಮೇಲೆಯೇ ನಮ್ಮ ಪಯಣ ಕೊರೆಯುವ ಚಳಿ , ಊಟದ ಸಮಯದ ವೇಳೆಗೆ ನಾವು ಇಂದು ಜಾಗದಲ್ಲಿ ನಿಂತೆವು ಕಲ್ಲುಗಳನ್ನು ಹುಡುಕಿ ಕುಳಿತೆವು , ಅಲ್ಲೇ ಮಾಡುತೀತ್ದ ಒಮ್ಲೆಟ್ ಹಾಗೂ ಬಿಸಿ ಬಿಸಿ ಮ್ಯಾಗಿ ಸವಿದೆವು ಇಸ್ಟು ಏತರದಲ್ಲೂ ನಾನು ನೋಡಿದ ಎರಡು ಪಕ್ಷಿಗಳೆಂದರೆ ಕಾಗೆ ಹಾಗೂ ಹದ್ದು , ಆಲ್ಲಿಂದ ನೋಡಲು ಗ್ರಹನ್ ಗ್ರಾಮವು ತುಂಬಾ ತುಂಬಾ ಚಿಕ್ಕದಾಗಿ ಕಾಣುತಿತ್ತು .ತಡ ನಂತರ ನಾವು ಒಂದು ದಾರಿಯಲ್ಲಿ ನೆಡೆದವು ಸ್ವಲ್ಪ ಎಚ್ಚರ ತಾಪಿದರು ಆಪಾಯ ಕಂಡಿತ ಆದರೂ ಜೊತೆಗಿದರೆಲ್ಲ ಹುರಿ ದುಂಬಿಸಿ ನೆಡೆಯುತಿದೆವು ,ಕೆಲವು ಕಾಡೇ ಕಾಲು ಹಿಮದಲ್ಲಿ ಕುಸಿಯುತಿದವು ,ಕುಸಿದಾಗ ಹೃದಯ ಜ್ಯಾಲ್ ಎನುತಿತು .ನೆಡೆ ನೆಡೆಯುತಿದಹಾಗೆ ಹಿಮದ ಮಳೆ ಸುರಿಯಲು ನಾವು ದಾರಿ ಕಾಣಲು ತುಂಬಾ ಕಸ್ತವಾಗೀತು ಆಗ ಅಲ್ಲಿದ್ದ ಷೇರ್ಪಗಳು ನಮ್ಮಗೆ ದಾರಿ ತೋರಿಸುತಿದರು ಹಾಗೂ ಎಲ್ಲರಿಗೂ ಹಿಮದ ಆ ಕಡಿದಾದ ಎತ್ತರವನ್ನು ಏರಲು ಸಹಾಯವಾಯಿತು ಸರಿ ಸುಮಾರು 4:00ಗಂಟೆಗೆ ನಾವು ಗುರಿ ಮೂಟಿದೆವು ಬದುಕುಳಿದೆಯಾ ಬಡಜೀವ ಎನ್ನುವ ಪರಿಸ್ತಿತಿಯಲ್ಲಿ ನಾವು ಇದೆವು ಹೊರಗಡೆ ಹಿಮದ ಮಳೆ ಕೊರೆಯುವ ಚಳಿ ಈಗಿರುವಾಗ ನಮ್ಮಗೆ ಬಿಸಿ ಬಿಸ್ ಸೂಪ್ ಸಿಕ್ಕಿತು,ಅದು ಎಸ್ಟು ಮುದನೀಡಿತು ಎಂದರೆ ಹೇಳತೀರದು ತದನಂತರ ಸಂಜೆ ಸುಮಾರು 5:30 ಕ್ಕೆ ನಮ್ಮಗೆ ಊಟ ಚಪಾತಿ , ಕಿರು ,ಕ್ಯಾಂಪ್ ಲೀಡರ್ ಪರಿಚಯವಾಯೇತು ಹಾಗೂ ಅವರ ಸೂಚನೆ ಪ್ರಕಾರ ಮುಂದಿನ ದಿನ ಬೆಳಗ್ಗೆ 4:30ಕ್ಕೆ ನಾವು ನಮ್ಮ ಪಯಣ ಶುರು ಮಾಡಬೇಕು ಆದರಿಂದ ಬೇಗ ಮಲಗಬೇಕು , ಹಾಗೂ ಅಲ್ಲಿ ಒಂದು ಚಿಕ್ಕ ಜಾಗವಿತು ಆಲಿ ಯಾರು ಹೋಗಬಾರದೆಂದು ಸುಕಾಹ್ನೆ ಇತ್ತು , ಅಲ್ಲಿಯ ಸತ್ಳೀಯಾರ ಪ್ರಕಾರ ದೇವರು ಅಲ್ಲಿ ವಾಸಿಸುತಾರೆ ಹಾಗೂ ಅಲ್ಲಿ ಶುಬ್ರಥೆ ಹಾಗೂ ನಿಶ್ಯಬ್ದ ಕಾಪಾಡಬೇಕು .ಊಟದ ಸಮಯದ ವೇಳೆಗೆ ನಾವು  ಹೊರಗಡೆ ನೋಡಿದೆವು ಸುಂದರ್ ಮನೋಹರ ದೃಶ್ಯ ಆ ವಾತಾವರಣ ಹಾಗೂ ಜಾಗ ಯಾವ ಸ್ವರ್ಗಕ್ಕೂ ಕಡಿಮೆ ಇರಲ್ಲಿಲ .ಊಟದ ನಂತರ ಇನ್ನೂ ಸೂರ್ಯ ಮುಳುಗಿರಲ್ಲಿಲ ಆಗಲೇ ನಮಗೆ ಸ್ಲೀಪಿಂಗ್ ಬ್ಯಾಗ್ಸ್ ಕೋಟರು 7 ಗಂಟೆ ವೇಳೆಗೆ  ಎಲ್ಲರೂ ದಣಿಡಿದರು ಒಬ್ಬರಾಗಿ ಮಲಗಲು ಶುರುವಾದರೂ , ನಾನು ನನ್ನ ದಿನಚರಿ ಬರೆದು ಸ್ವರ್ಗ ಎಂದರೆ ಇದೇನಾ ಎಂಬ ಪ್ರಶನೇಯಾಲೆ ನಿದ್ದೆಗೆ  ಜಾರಿದೆ .

ದಿನ 8:ತುಂಬಾ ಚಳ್ಳಿ ಇದರಿಂದ ಆಸ್ಟೊಂದು ನಿದ್ದೆ ಬರಲೀಲ 3:00ಕ್ಕೆ ಎದ್ದು ಸುಮಾರು 3 ಡಿಗ್ರೀ ಹೊರಗಡೆ ಸಂಪೂರ್ಣ ಜಾಗ ಹಿಮದಲ್ಲಿ  ಕಲ್ಲುತರ ಇದೆ,ಇದರಲ್ಲಿ  ನಮ್ಮ ನಿತ್ಯ ಕ್ರಮಗಳನ್ನು ಮುಗಿಸಿಸಿದೆವು ಹೇಗೆ ಎಂಬುದನ್ನು ನಿಮ್ಮ ಊಹೆಗೆ ಬಿಟ್ಟಿದು ,ಸುಮಾರು 4:30 ಗೆ ಎಲ್ಲರೂ ಸಿದ್ದವಾದರೂ , ಇಂದು ನಮ್ಮ ಎಲ್ಲರ ಕಾಡಿದಾ ಆ ದಿನ ಸಾರ್ಪಸ್ ದಾಟುವ ಹಾಗೂ ನಮ್ಮ ಗುರಿ ತಲುಪುವ ,ಇದಕ್ಕಾಗಿಯೇ ಇಸ್ಟು ದಿನ ಕಸ್ಟ ಪಟ್ಟಿದು .ಎಲ್ಲರೂ ದೇವರ ಹೆಸರು ಹೇಳಿ ನೆಡೆಯಲು ಪ್ರಾರಂಬ ಮಾಡಿದೆವು , ತುಂಬಾ ಕಡಿದಾದ ಪ್ರದೇಶ ಸರಿಸುಮಾರು  0.5 ಕೇಯೆಮ್ ಕಿಂತ ಕಡಿಮೆ ಇದೆ ಆದರೆ ನಾವು ಆದನು ದಾಟುವ ವೇಳೆಗೆ ಸೂರ್ಯ ದರ್ಶಿಸಿದ , ಒಬ್ಬ ಸಹಯೋಗಿ ತನ್ನ ಮೊಬೀಲ್ಡ್ ಬೀಳಿಸಿದ ಆದರೆ ಕೆಲಕ್ಷನದಲ್ಲೇ ಆಡು ಮಾಯವಾಗೀತು ಅವನ್ನು ಆದನು ಹುಡುಕಲು ಹೋಗುತಿದ ನಾವು ತಡೆದೆವು ಹೇಳಿದೆವು ಸಾರ್ಪಸ್ ಮುಗಿದಮೇಲೆ ನೀನು ಇನೊದನು ತಗೋ ಜೀವಾಕಿಂತ ಮಿಗಿಲಾದದು ಯಾವುದು ಇಲ್ಲ ಎಂದು , ನಾವು ಸುಮಾರು 8:30 ರ ವೇಳೆಗೆ ಸಾರ್ಪಸ್ ತಲುಪಿದೆವು ಎಲ್ಲರಿಗೂ ಎಲ್ಲಿಲದ ಸಂತೋಷ ,ಸಂಬ್ರಮ ಆದನು ನೋಡುವುದೇ ಒಂದು ಆನಂದ ಎಲ್ಲರೂ ತಬ್ಬಿಕೊಂಡರು ಫೋಟೋ ಕೀಕಿಸಿದರು , ನಾವು ಅಲ್ಲಿ ಒಮ್ಲೆಟ್ ಮತ್ತು ಮ್ಯಾಗ್ಗಿ ತಿಂದೆದ್‌ವು ,ಕೊರೆಯುವ ಚಳ್ಳಿಯಲ್ಲಿ ಆದನ್ನು ತಿನ್ನೋದೇ ಒಂದು ಮಜಾ,ಅಷ್ಟು ಏತರದಲ್ಲಿ ಈವನ್ನು ತೀನೂತೆವೆ ಎಂಬ ಕಲ್ಪನೆಯೂ ಇರಲ್ಲಿಲ ,ಸ್ವಲ್ಪ ಸಮಯ ಕಳೆದ ಮೇಲೆ ನಾವು ಅಲ್ಲಿಂದ ಮುಂದೆ ಸಾಗಿದೆವು , ಮುಂದೆ ಸಂಪೂರ್ಣ ಮಂಜು ಆದರಮೇಲೆಯೇ ನಮ್ಮ ಪಯಣ , ಕೆಲವೊಮ್ಮೆ ಮಂಜು ಕರಗಿ ಕಾಲು ಕುಸಿಯುತಿತು ಆಗ ಜೀವ "ಜಲ್ " ಎನುತಿತು ಆದರೂ ಸಹಪತಿಗಳ ಸಹಾಯದಿಂದ ಪಯಣ ಮುಗಿಸಿದೆವು , ಮಂಜಿನ ಮೇಲೆ ನೆಡೆಯುವುದು ತುಂಬಾ ಕಸ್ಟ ಹಾಗೂ ಸೂರ್ಯನ ಕಿರಣಗಳು ನೇರವಾಗಿ ಕಣ್ಣಿಗೆ ಹೊಡೆಯುತದೆ ಆದರಿಂದ ಸನ್‌ಗ್ಲಾಸಸ್ ಇಲ್ಲದೆ ಅಲ್ಲಿ ನೆಡೆಯುವುದು ತುಂಬಾನೇ ಕಸ್ಟ ,ಒಂದು ಕಡೆ ನಾವು ಹಾಗ ಹಿಡಿದು ಮೇಲೆ ನೆಡೆಯ ಬೇಕು ಯಾಕಂದರೆ ಆಡು ತುಂಬಾ ಕಾಡಿದಾಗಿತು ಆಡು ಆದ ಮೇಲೆ ನಾವು ಸ್ಲೈಡ್ ಮಾಡಬೇಕು ನಿಜವಾಗಲೂ ಸ್ಲೈಡ್ ಮಾಡುವಾಗ ನಮ್ಮ ಸಂಸಾರ ಹಾಗೂ ದೇವರು ಕಣ್ಣ ಮುಂದೆ ಆದು ಹೋಗುತಾರೆ  , ಸ್ಲೈಡ್ ಮಾಡಿದ ಮೇಲೆ ನಮ್ಮಗೆ ಊಟದ ಸಮಯ ಅಲ್ಲೇ ನಾವು ಮ್ಯಾಗಿ ಮಾತೆ ಒಮ್ಲೆಟ್ ತಿಂದು ನಮ್ಮ ಸಾಕ್ಸ್ ಒಣಗಿಸಿದೆವು,ಮತ್ತೆ ನಾವು ಅಲ್ಲಿಂದ ಇನೋಡು 2KM ಸ್ಲೈಡ್ ಮಾಡಿದೆವು ಮೊದಲ ಸ್ಲೈಡ್ ಗೆ ಭಯಾವಿತು ಈಗ ಅಬ್ಯಾಸವಾಗಿತು . ತದ ನಂತರ ನಾವು ಸ್ವಲ್ಪ ನೆಡೆದೆವು ಆಮೇಲೆ ಅಲಿಂದ ಸ್ವಲ್ಪ ದೂರದ ಸ್ಲೈಡ್ ನಲ್ಲಿ ಸಿಕ್ಕಿಕೊಂಡೆವು ಸಂಪೋರ್ನ ಸ್ಲೈಡ್ ಮಾಡೋದಿಕ್ಕೆ ಆಗಲೀಲ ಆದರಿಂದ ದೇಕುತೆ ಹೋದೆವು ಸ್ವಲ್ಪ ಸಮಯ ನೆಡೆದ ಬಳಿಕ ನಾವು ಸಂಪೂರ್ಣ ಒದ್ದೆಯಾಗಿ ತುಂಬಾ ದಣಿದು ನಮ್ಮ ಕ್ಯಾಂಪ್ ಬಿಸ್ಕೇರಿ (Biskeri) ಸುಮಾರು 4ಕ್ಕೆ  ಸೇರಿದೆವು. ಮೊದಲೇ ಒದ್ದೆಯಾಗ್ಗಿದ ನಮಗೆ ಮೊದಲು ಟೆಂಟ್ ನಲ್ಲಿ ಕುಳಿತು ಸ್ವಲ್ಪ ವಿರಮಿಸಿದೆವು , ತದನಂತರ ನಮ್ಮಗೆ ಬಿಸಿ ಬಿಸಿ ಸೂಪ್ ಕೊಟ್ಟರು ತದನಂತರ ಸುಮಾರು 6ಕ್ಕೆ ನಮಗೆ ಒಳೆಯ ಊಟ ಕೂಡ ದೊರಕ್ಕಿತು , ಊಟ ಸವಿದನಂತರ ಎಲ್ಲರೂ ಕೊಂಚ ಮಾತಾಡಿದರು , ಸುತಲ್ಲೂ ಇದ್ದ ಪ್ರದೇಶವು ಶಾಂತತೆ ಇಂದ ಕೂಡಿತು ಹಾಗೂ ಪ್ರಕೃತಿಯ ಮಡಿಲಲ್ಲಿ ನಾವು  ಎಲ್ಲರೂ ನೀದರದೇವತೆಗೆ ಶರಣಾದರೂ .

ದಿನ 9:ಇಂದು ಎಂದಿನಂತೆ ಬೇಲಿಗೆ ಬೇಗನೆ ಎದು ಸುಂದರ ಪರಿಸರವನ್ನು ಊಮೆ ನೋಡಿದೆವು ಎಂತಹ ಹಹಲದಕರ ವಾತಾವರ್ಣ ಬೆಳಗಿನ ಚಹಾ ಕುಡಿದು ಒಮ್ಮೆ ಸುತಾಡಿ ಬೆಳ್ಳಗಿನ ತಿಂಡಿ ಮುಗಿಸಿ ಮಧ್ಯಾನ ಡಾ ಊಟಕೆ ಡಬ್ಬಿ ತುಂಬಿ ನಮ್ಮ ಮುಂದಿನ ಗುರಿಯಾದ ಭಂಡಕ್ ಥ್ಯಾಚ್ (BhandakThach ) ಅದು ಸುಮಾರು 4 -5 ಗಂಟೆಯ ದೂರ ,ಹೊಗುವ ದಾರಿ ಸ್ವಲ್ಪ ಇಳಿಜಾರು ಆದರಿಂದ ಹುಷಾರಾಗಿ ನೆಡಿತ ಇದ್ವಿ , ನೆಡಿತ ನೆಡಿತ ಸಾಗಿದೆವು , ಈಗೆ ದಾರಿಯಲ್ಲಿ ಮಳೆ ಹಾಗೂ  ಹಿಮದ ಮಳೆ ಎರಡು ಓಟಿಗೆ, ಹಿಮದ ಮಳೆಯನ್ನು ನೋಡುವ ಆನಂದವೇ ಆನಂದ , ಸುಮಾರು 1 ತಾಸು ಹಿಮದ ಮಳೆಯ ನಂತರ ದಾರಿ ತುಂಬಾ ಜಾರುತಿತು ಹುಷಾರಾಗಿ ಹೋಗ್ತಾ ಇದ್ವಿ , ನಮ್ಮ ಗೊಂಪಿನ ಒಬ್ಬರು ಜರಿದರೂ ಹಾಗೂ ಅವರ ಕಾಲಿಗೆ ಪೆಟ್ಟು ತಗುಲಿತು ಹಾಗೂ ಅವರನ್ನು ಆಸ್ಪತ್ರೆ ಗೆ ಸೇರಿಸಾಬೆಗಾಗೀತು ಹಾಗಾಗಿ ನಮ್ಮ ಗ್ರೂಪ್ ಲೀಡರ್ ಗ್ರೂಪ್ ನಾ ಜವಾಬ್ದಾರಿಯನ್ನು ನನಗೆ ವಹಿಸಿ ನಾವು ಸೀದಾ ಕಸೊಲ್ಗೆ ಹೋಗೋಣ ಎಂದು ನಿರ್ದಾರಿಸಿ ನಾವು ನೆಡೆದೆವು , ನಾನು ಪೂರ್ಣ ಗೂಪನ್ನು ಕರೆದುಕೊಂಡು ಕಾಡಿನಲ್ಲಿ ಸುತಿಕೊಂಡು ನೆಡೆದೆವು ಸುಮಾರು ಸಂಜೆ 6ಕ್ಕೆ ನಾವು ಹಳ್ಳಿಯನ್ನು ತಲುಪಿದೆವು ಅಲ್ಲಿಂದ ನಾವು ಕಸೊಲ್ಗೆ ಗಡಿಯಲ್ಲಿ ನೆಡೆದೆವು , ಹೋಗಬೇಕಾದ್ರೆ ನಮ್ಮ ಜೊತೆಗೆ ಬಂದ ನಾಯಿ ಸ್ವಲ್ಪ ದೂರ ನಮ್ಮ ಜೊತೆಗೆ ಬಂದಿಡ್ತು ಅದಕ್ಕೆ ಬೀಳ್ಕೊಡುತ ನಮ್ಮ ಟ್ರೆಕ್ ಸಂಪೂರ್ಣವಾಯಿತು , ಒಂದು ಸುಂದರ್ ಮನೋಹರ 8 ದಿನಗಳು ಜಾಗತಿನಿಂದ ದೂರ ಹಾಗೂ ಪರಿಸರಕ್ಕೆ ಹತ್ತಿರ ಇದ್ದೆವು , ನಾನಾ ಜೀವನದ ಮೊದಲ ಸಲ ಪರಿಸರಕ್ಕೆ ಇಸ್ಟು ಹತ್ತಿರ ಇದಿದು ಒಂದು ಮನೋಹರ ಹಾಗೂ ಪರಿಸಾರ್ದಿಂದ ಕಲಿತ ಜೀವನ ಪಾಠಗಳು.ಹಿಮಾಲಯವು ಎಸ್ಟೊಂದು ಸ್ಪೋರ್ತಿದಯ ಎಂದು ಕೇಳಿದೆ ಆದರೆ ಇಂದು ಆರಿವಿಗೆ ಬಂತು , 9 ದಿನಗಳಲಿ ನಾನು ಅನುಬವಿಸಿದ ಅನುಬವ ಹಾಗೂ ಪಡೆದ ಬಂದ್ವ್ಯ ತುಂಬಾ ಆಪರೂಪ ಹಾಗೂ ಅಮೋಗವಾದದು ,ಸಂಜೆ ರಾತ್ರಿ 10 ಕ್ಕೆ ನಾವು ಕಸೋಲ್ ಕ್ಯಾಂಪ್ ಗೆ ಸೇರಿದೆವು ಹೇಳಿದಹಾಗೇನೆ ನಾವು ಸಂಪೂರ್ಣ ಟೀಮ್ ಜೊತೆಗೆ ಬಂದೆವು ಇದನ್ನ ನೋಡಿ ಅಲ್ಲಿದಾ ಡೈರೆಕ್ಟರ್ ಸಂತೋಷ ವಾದರೂ,  ಅಂದು ರಾತ್ರಿ ಅಲ್ಲೆ ತಂಗಿದು ಬೇಲಿಗೆ ನಮ್ಮ ಸಾಮಾನುಗಳನ್ನು ತಗೆದುಕೊಂಡು ಎಲ್ಲರಿಗೂ ಬಿಳ್ಹ್ಕೊಡುತ ಮತ್ತೆ ಸಿಗುವ ಎಂಬ ಬರವಸೆಯೊಂದಿಗೆ ನಾವು ಬಸ್ ಏರಿದೆವು .ದಾರಿಯುದಕು 9 ದಿನಗಳ ರೋಮಾಂಚಕ ಅನುಬವವನ್ನು ಮೆಲಕುತ್ತ ನನ್ನ ದಾರಿ ಸವಿದೆವು

ಮುಂದಿನ ದಿನಗಳಲಿ ಇನ್ನೂ ಹೆಚ್ಚು ಜಾಗಾಗಳ ಪರಿಚಯ ಹಾಗೂ ಅನುಬವಾಗಳಿಗೆ ಕಾತುರತೆ ಇಂದ ಕಾಯುತಿರುವೆ

ಕೆಲವು ನಾನು ತೆಗೆದ ಛಾಯಾಚಿತ್ರಗಳನು ನೋಡಲು ಕೆಳಗಿನ ಅಂತರ್ಜಾಲ್ದ ಸಂಪರ್ಕ ಕೊಂಡಿಯನ್ನು ಒತ್ತಿ.
https://www.facebook.com/media/set/?set=a.1479221292289869.1073741840.1393567807521885&type=1 

No comments:

Post a Comment